ಇಂದು ಮತ್ತೊಮ್ಮೆ ಸಿರಾ ತಾಲ್ಲೂಕು ಗ್ರಾಮೀಣ ಭಾಗದ ಗಜಮಾರನಹಳ್ಳಿ, ಭೂತಕಾಟನಹಳ್ಳಿ, ಕಗ್ಗಲಡು, ಗೌಡಗೆರೆ, ಹೊನ್ನೇನಹಳ್ಳಿ, ಬೇವಿನಹಳ್ಳಿ, ಹೊಸೂರು, ರಂಗನಹಳ್ಳಿ, ಭೂತಪ್ಪನಗುಡಿ,ತಾವರೇಕೆರೆ ಗಳಲ್ಲಿ ತರೆದಿರುವ ದಿನಸಿ ಅಂಗಡಿ, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮಾರಾಟ ಮಾಡಲಾಗುತ್ತಿದ್ದ ಬೀಡಿ, ಸಿಗರೇಟ್, ಪಾನ್ ಮತ್ತು ಅಕ್ರಮ ಮಾತ್ರೆಗಳನ್ನು ಕಂದಾಯ ಇಲಾಖೆಯ ನಮ್ಮ ತಂಡದ ಸದಸ್ಯರು ಗ್ರಾಮಲೆಕ್ಕಿಗರಾದ
ನೀಲಾಂಬಿಕಾ, ಸುನಿತಾ ಸಿ.ಎಸ್., ತನುಶ್ರೀ , ಅನಿತಾ ಮತ್ತು ಕಾಂತರಾಜು, ವಿಜಯ್ ಕುಮಾರ್ ಚೌಹಾಣ್, ಸುದರ್ಶನ್, ನಾಗರಾಜು ಮಲ್ಲಾಪುರ, ಗಂಗರಾಜು, ದಫೇದಾರ್ ಚಂದ್ರಪ್ಪ, ಚಾಲಕ ಮುರಳಿ ರವರು ಸಂಜೆ ೬ ರಿಂದ ೧೦ ರ ಸಮಯದಲ್ಲಿ ವಶಪಡಿಸಿಕೊಳ್ಳಲಾಯಿತು...
ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿಯೂ ತಿಳುವಳಿಕೆ ಮುಖಾಂತರ ಹಾಗೂ ಪತ್ರಿಕಾ ಪ್ರಕಟಣೆ ಮೂಲಕ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಿದ್ದರೂ ಸಹಾ ಮಾರಾಟ ಮಾಡುತ್ತಿರುವುದು ಸಾರ್ವಜನಿಕರ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ
ಮುಂದಿನ ದಿನಗಳಲ್ಲಿ ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳದಿದ್ದಲ್ಲಿ ಅಂಗಡಿಯನ್ನ ಸೀಲ್ ಮಾಡಿಸಿ, ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ..
ಇದು ಸಿರಾ ತಾಲ್ಲೂಕು ಆಡಳಿತ ನೀಡುವ ಎಚ್ಚರಿಕೆ
ಎಂದು ತಿಳಿದು ಕೋರೋನಾ ಎಂಬ ರೋಗವನ್ನು ತೊಲಗಿಸಲು ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಎಲ್ಲಾ ಸಾರ್ವಜನಿಕರು ಸಹಕರಿಸಿರಿ...
0 Comments