ಕರ್ತವ್ಯದ_ಜತೆ_ಮಾನವೀಯತೆ_ಮೇರೆದ ಪಿಎಸ್ಐ_ಮಹಾಲಕ್ಷ್ಮಮ್ಮ ವಿಡಿಯೋ ನೋಡಲು ರೆಡ್ ಬಟನ್ ಪ್ರೆಸ್ ಮಾಡಿ. #ಕರ್ತವ್ಯದ_ಜತೆ_ಮಾನವೀಯತೆ_ಮೇರೆದ #ಪಿಎಸ್ಐ_ಮಹಾಲಕ್ಷ್ಮಮ್ಮ ಮಿಡಿದ ಹೃದಯ ಪೊಲೀಸ್ ಎಂದರೆ ಜನ ಕೋಪ ಗೊಳ್ಳುವುದು ಸಹಜ ಆದರೆ ಶಿರಾ ತಾಲ್ಲೂಕು ತಾವರೆಕೆರೆ ಪೊಲೀಸ್ ಠಾಣೆ ಜನಸ್ನೇಹಿ ಪೊಲೀಸ್ ಠಾಣೆ ಎಂದು ಹೆಸರು ಪಡೆದಿದೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್ಐ ಮಹಾಲಕ್ಷ್ಮಮ್ಮ ಮತ್ತು ಸಿಬ್ಬಂದಿ ವರ್ಗ ಲಾಕ್ ಡೌನ್ ಆದಾಗಿನಿಂದಲೂ ತುಮಕೂರು ಜಿಲ್ಲೆಯ ಸರಹದ್ದು ಮುಕ್ತಾಯವಾಗುವ NH-48 ಉಜ್ಜನಕುಂಟೆ ಬಳಿ ತುಮಕೂರು ಜಿಲ್ಲೆ ಯೊಳಗಡೆ ಕಣ್ತಪ್ಪಿಸಿ ಬರುವ ವಾಹನಗಳನ್ನು ಹದ್ದಿನ ಕಣ್ಣಿನ ಹಾಗೆ ದಿನದ 24 ಗಂಟೆ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿರುವ ಜೊತೆಗೆ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಪಿಎಸ್ಐ ಮಹಾಲಕ್ಷ್ಮಮ್ಮ ತನ್ನ ಸಂಬಳದಲ್ಲಿ 250 ಕ್ಕು ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ತಾವರೆಕೆರೆಯ ಶಿವು, ಭೂತಯ್ಯ, ಮಲ್ಲಿಕಾರ್ಜುನ್, ಪ್ರಸನ್ನ, ಸಂದೀಪ್, ಶಿವು ಸ್ನೇಹಪ್ರಿಯ, ಜೊತೆಗೂಡಿ ಬಂಡಿ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಇಂದು ಬೆಳಗ್ಗೆ ಹಂಚಿಕೆ ಮಾಡಲಾಗಿತು, ತಾವರೆಕೆರೆ ತಾಯಂದಿರಿಗೆ ಪಿಎಸ್ಐ ಮಹಾಲಕ್ಷ್ಮಮ್ಮ ಎಂದರೆ ಮನೆ ಮಗಳು ಎಂಬುವ ಪ್ರೀತಿ, ಯಾರ ಮಗಳಾದರೆನು ನಮ್ಮ ಮನೆ ಮಗಳ ರೀತಿ ನಮ್ಮ ಕುಟುಂಬದ ಸದಸ್ಯರ ರೀತಿ ನಮ್ಮ ಕಷ್ಟ ಕೇಳುವ ಇಂಥ ಅಧಿಕಾರಿಗಳು ನಮ್ಮ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆ ಎಂದು ತಾವರೆಕೆರೆ ತಾಯಂದಿರ ಪ್ರೀತಿಯ ಮಾತುಗಳು, ಇಂಥ ಕಷ್ಟಕಾಲದಲ್ಲಿ ಕರ್ತವ್ಯದ ಜತೆ ಮಾನವೀಯತೆ ರೂಢಿಸಿಕೊಂಡಿರುವ ಪಿಎಸ್ಐ ಮಹಾಲಕ್ಷ್ಮಮ್ಮ ಅವರಿಗೆ ತಾವರೆಕೆರೆ ಗ್ರಾಮಸ್ಥರಿಂದ ತುಂಬು ಹೃದಯದ ಧನ್ಯವಾದಗಳು ವರದಿ:- ಬುಕ್ಕಾಪಟ್ಟಣ ರಾಜು #ತಾವರೆಕೆರೆ #ಶಿರಾ #ತುಮಕೂರು ತಾಲೂಕಿನ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಇದು ನಿಮ್ಮ ನೆಚ್ಚಿನ #SIRA_FB_TV