#ಪ್ರಧಾನಮಂತ್ರಿಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ #ಶಿರಾತಾಲ್ಲೂಕಿನ 128 ನ್ಯಾಯ ಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಅಕ್ಕಿ ಮತ್ತು ತೊಗರಿಬೇಳೆ ವಿತರಿಸುವ ಕಾರ್ಯ ಮೇ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ... ಪಡಿತರ ವಿತರಣೆಯಲ್ಲಿ ಅಕ್ರಮ ಎಸುಗುವ ನ್ಯಾಯ ಬೆಲೆ ಅಂಗಡಿ ಮಾಲೀಕರ ಮೇಲೆ ಯಾವ ಮುಲಾಜಿಲ್ಲದೆ ಕಠಿಣ ಕ್ರಮ ಕೈ ಗೊಳ್ಳಲಾಗುತ್ತದೆ ಎಂದು #ಜಿಲ್ಲಾಉಸ್ತುವಾರಿಸಚಿವರಾದಜೆಸಿಮಾಧುಸ್ವಾಮಿ ಯವರು ಎಚ್ಚರಿಕೆ ನೀಡಿದರು... ಇಂದು (25-4-2020) ಶಿರಾ ಪ್ರವಾಸಿ ಮಂದಿರದಲ್ಲಿ ತಾಲ್ಲೂಕಿನ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ #ಸಚಿವರು ಕೇಂದ್ರ ಸರ್ಕಾರ #ಉಚಿತವಾಗಿ ಬಿಡುಗಡೆ ಮಾಡಿರುವ ಆಹಾರ ಧಾನ್ಯಗಳನ್ನ ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು.. ತೂಕದ ಲ್ಲಿ ಮೋಸ ಮಾಡುವುದು, ಪಡಿತರ ಚೀಟಿದಾರರಿಂದ ಹಣ ವಸೂಲಿ ಮಾಡುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ತಾಲ್ಲೂಕು ತಹಸೀಲ್ದಾರ್ ರವರಿಗೆ ಆದೇಶ ನೀಡಿದರು... ಆಹಾರ ಇಲಾಖಾ ಗೋಡನ್ ನಿಂದ ಎತ್ತುವಳಿ ಆಗುವ ಆಹಾರ ಧಾನ್ಯವನ್ನ ನಿಖರ ತೂಕದ ಪ್ರಮಾಣದಲ್ಲಿ ಎತ್ತುವಳಿ ಮಾಡುವಂತೆಯೂ ಸೂಚಿಸಿದರು... #ಶಿರಾತಾಲೂಕಿನಲ್ಲಿ 7056 ಅಂತ್ಯೋದಯ ಹಾಗೂ 73048 ಬಿಪಿಎಲ್ ಪಡಿತರ ಚೀಟಿಗಳಲ್ಲಿನ 276548 ಪಡಿತರದಾರರಿಗೆ ತಲಾ 5 ಕೆಜಿಯಂತೆ ಏಪ್ರಿಲ್ ಮತ್ತು ಮೇ ತಿಂಗಳು ಸೇರಿದಂತೆಬಿಡುಗಡೆ ಆಗಿರುವ ಎರಡೂ ತಿಂಗಳುಗಳ ಅಕ್ಕಿ 27654 ಕ್ವಿಂಟಲ್.... ಅದೇ ರೀತಿ ಪಡಿತರ ಚೀಟಿ ಒಂದಕ್ಕೆ ಒಂದು ತಿಂಗಳಿಗೆ ಒಂದು ಕೆಜಿಯಂತೆ ಬಿಡುಗಡೆ ಆಗಿರುವ ತೊಗರಿಬೇಳೆ 801 ಕ್ವಿಂಟಲ್... ಸಾವಿರಾರು ಕ್ವಿಂಟಲ್ ಆಹಾರ ಧಾನ್ಯವನ್ನ ಕೇಂದ್ರ ಸರ್ಕಾರ ಉಚಿತವಾಗಿ ನೀಡಿದೆ... ವಿತರಣೆಯಲ್ಲಿ ಯಾವುದೇ ಲೋಪವಾದರೂ ಅದನ್ನ ಸಹಿಸಲು ಆಗುವುದಿಲ್ಲ... ಆ ನಿಟ್ಟಿನಲ್ಲಿ ನೀವು ಕಾರ್ಯ ನಿರ್ವಹಿಸಿ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ #ಸಚಿವರು ಹೇಳಿದರು... ಶಿರಾ ನಗರದಲ್ಲಿ ಕೊರೋನಾ ರೋಗ ನಿಯಂತ್ರಣ ಕಾರಣದಿಂದ ತೆಗೆದು ಕೊಂಡಿರುವ ಕ್ರಮಗಳು ಮೇ 3ನೇ ತಾರೀಕಿನ ತನಕ ಮುಂದುವರಿಯಲಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ದುರಸ್ತಿ, ಕುಡಿಯುವ ನೀರು ಸೇರಿದಂತೆ ಇತರೇ ಅಭಿವೃದ್ಧಿ ಕಾಮಗಾರಿ ಆರಂಭ ಮಾಡುವಂತೆ ಸೂಚನೆ ನೀಡಿದರು. ರೈತರ ಜಮೀನುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಮಣ್ಣು ಹಾಗೂ ನೀರು ಸಂರಕ್ಷಣೆ ಮಾಡುವ ಕಾಮಗಾರಿಗಳನ್ನ ಮಾಡುವಂತೆ ಸಲಹೆ ನೀಡಿದರು..ಕೃಷಿ ಇಲಾಖೆ ಅಧಿಕಾರಿಗಳು ಬೀಜ ಹಾಗೂ ರಸ ಗೊಬ್ಬರ ವಿತರಣೆಯಲ್ಲಿ ಅಗತ್ಯ ಕ್ರಮ ಕೈ ಗೊಂಡು ರೈತರ ಸಂಕಷ್ಟ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ಕಾರ್ಯ ನಿರ್ವಹಣೆ ಮಾಡಬೇಕಿದೆ.ಜನ ಜೀವನ ಮುಂಬರುವ ದಿನಗಳಲ್ಲಿ ಯಥಾ ಸ್ಥಿತಿಗೆ ಬರುವ ಲಕ್ಷಣಗಳಿವೆ..ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ತಮ್ಮಿಂದ ಆಗಲಿ ಎಂದು ಅಧಿಕಾರಿಗಳಿಗೆ ಕಿವಿ ಮಾತು ನುಡಿದರು. ಜಿಲ್ಲೆಯ ಹೆಚ್ಚುವರಿ ಜಿಲ್ಲಾದಿಕಾರಿಗಳಾದ ಚನ್ನಬಸಪ್ಪ, ತಾಲೂಕು ತಹಸೀಲ್ದಾರ್ ನಾಹಿದಾ ಜಮ್ ಜಮ್, DSP ಕುಮಾರಪ್ಪ,ಜಿಲ್ಲಾ ಹಾಲು ಉತ್ಪಾದಕ ಮಹಾ ಮಂಡಲದ ನಿರ್ದೇಶಕರಾದ S. R. ಗೌಡ, ಜಿ. ಪಂ. AEE ಮಂಜು ಪ್ರಸಾದ್, ತಾ. ಪಂ. EO ಮೋಹನ್ ಕುಮಾರ್, PWD AEE ಮಲ್ಲೇಶಪ್ಪ, ಆಹಾರ ಇಲಾಖೆಯ ಸುಜಾತ ಮೇಡಂ, ರೋಹಿಣಿ ಮೇಡಂ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು..