ಮಾನವೀಯತೆ ಮೇರೆದ ಶಿರಾ ತಹಶೀಲ್ದಾರ್ ನಾಹಿದಾ ಜಮ್ ಜಮ್
ಶಿರಾ ತಾ॥ ತಹಶೀಲ್ದಾರ್ ಮತ್ತು ದಂಡಾಧಿಕಾರಿಗಳೂ ಆದ ನಾಹಿದಾ ಜಮ್ ಜಮ್ ರವರ ಮಾನವೀಯತೆ ಮತ್ತು ಕರ್ತವ್ಯ ನಿಷ್ಠೆಗೆ ರಾತ್ರಿ ನಡೆದ ಒಂದು ಘಟನೆ ಉದಾಹರಣೆ :- ಸ್ನೇಹಿತರಾದ ಹಿಂದೂ ಜಾಗರಣ ವೇದಿಕೆ ಮಂಜು ಮತ್ತು ಶ್ಯಾಮ್ ಸುಂದರ್ ರವರು ಬಯಲು ಆಂಜನೇಯ ಸ್ವಾಮಿ ದೇವಸ್ಥಾನ ಮಾನಂಗಿ NH-48 ಬಳಿ ಊಟ ಕೊಡಲು ಹೋದಾಗ ಒಂದು ನಿರಾಶ್ರಿತರ ಫ್ಯಾಮಿಲಿಯ( ಯುವತಿ ಯುವತಿಯ ತಾಯಿ ಮತ್ತೊಬ್ಬ ಮಹಿಳೆ) ಕಷ್ಟ ಕೇಳಿ ನೀವು ಈ ಜಾಗದಲ್ಲಿ ಇರುವುದು ಸೂಕ್ತವಲ್ಲ ಎಂದು ಮಂಜು ಮತ್ತು ಶ್ಯಾಮ್ ಸುಂದರ್ ರವರು ತಹಶೀಲ್ದಾರ್ ನಾಹಿದಾ ಜಮ್ ಜಮ್ ರವರನ್ನು ರಾತ್ರಿ ಹತ್ತು ಗಂಟೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಇವರ ಕಷ್ಟವನ್ನು ತಿಳಿಸಿ ಎಸಿ ಮೇಡಂ ಮತ್ತು ಡಿವೈಎಸ್ಪಿ ಸಿಬ್ಬಂದಿ ವರ್ಗ ದ ಜೊತೆ ಶಿರಾ ನಗರದ ಒಂದು ವಾರ್ಡ್ ಸೀಲ್ಡ್ ಡೌನ್ ಕರ್ತವ್ಯದಲ್ಲಿದ್ದರೂ ಸಹ ರಾತ್ರಿ 10:30 ಕ್ಕೆ ಸ್ಥಳಕ್ಕೆ ಆಗಮಿಸಿ ಯುವತಿ ಮತ್ತು ಅವರ ತಾಯಿ ಜೊತೆ ಪ್ರೀತಿಯಿಂದ ಮಾತನಾಡಿ ನಾನು ಸಹ ಒಂದು ಹೆಣ್ಣು ನಿಮ್ಮ ಕಷ್ಟ ನನಗೆ ಅರ್ಥ ಆಗುತ್ತದೆ ನಾವು ಇದ್ದೇವೆ ತಾಲ್ಲೂಕು ಆಡಳಿತ ನಿಮ್ಮ ಜೊತೆ ಇದೆ ನೀವು ಧೈರ್ಯದಿಂದ ಇರಲು ಹೇಳಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಸ್ಥಳವಾದ ಮೊರಾರ್ಜಿ ಹಾಸ್ಟೆಲ್ ಗೆ ಕಳುಹಿಸಿದರು. ಕಂದಾಯ ಇಲಾಖೆಯ ಸಿಬ್ಬಂದಿಗಳು ಸಂಜೆ ಐದು ಗಂಟೆಗೆ ಯಾರೂ ಸಿಗುವುದಿಲ್ಲ ಎಂಬ ಅಪವಾದ ಇದೆ ಇಂಥ ಅಧಿಕಾರಿಗಳು ಶಿರಾ ತಾಲ್ಲೂಕಿನ ದಂಡಾಧಿಕಾರಿ ಗಳಾಗಿರುವುದು ನಮ್ಮೆಲ್ಲರ ಹೆಮ್ಮೆ covid-19 ವಿರುದ್ಧ ಹೋರಾಡಲು ದಿನದ ಹದಿನೆಂಟು ಗಂಟೆ ಕೆಲಸ ಮಾಡುತ್ತಿರುವ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರಿಗೆ ಶಿರಾ ತಾಲ್ಲೂಕಿನ ನಾಗರಿಕರ ಪರವಾಗಿ ಕೋಟಿ ನಮನಗಳು 💐💐💐 ಮಂಜು ಶಾಂ ಸುಂದರ್ ಜೊತೆ ನಾನು ಸ್ಥಳಕ್ಕೆ ಹೋಗಿದ್ದೆ ಸ್ಥಳದಲ್ಲೇ ಇದ್ದುದ್ದರಿಂದ ನಾಹಿದ ಜಮ್ ಜಮ್ ಅವರನ್ನು ಮಾತನಾಡಿಸಿದಾಗ kovid-19 ಕರ್ತವ್ಯದಲ್ಲಿ ರುವುದರಿಂದ ನಮ್ಮ ತಂದೆ ತಾಯಿಗಳನ್ನು ಸುಮಾರು ದಿನಗಳಿಂದ ನೋಡಿಲ್ಲ ಭೇಟಿಯಾಗಿಲ್ಲ ಎಂದು ಭಾವುಕರಾದರು (ಇವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ತಂದೆ ತಾಯಿಗೆ ಮಗಳಲ್ಲವೇ) ಮಧ್ಯರಾತ್ರಿ ಸಮೀಪಿಸುತ್ತಿದ್ದರೂ ಮಂಗಳಮುಖಿಯರಿಗೆ ರೇಷನ್ ಕೊಡಬೇಕಾಗಿತ್ತು ಗುಟ್ಕಾ ಸಿಗರೇಟು ಮಾರಾಟ ಮಾಡುತ್ತಿದ್ದಾರ ಎಂದು NH-48 ರಸ್ತೆಯ ಸಣ್ಣ ಅಂಗಡಿಗಳಲ್ಲಿ ರೌಂಡ್ಸ್ ಕಣ್ಣಲ್ಲಿ ನಿದ್ದೆ .. ಇವರ ಜೊತೆ ಇದ್ದರೆ ನಾವು ಉಚ್ಚ ರಾಗುತ್ತೇವೆ ಎಂದು ನಾನು ಶ್ಯಾಮ್ ಸುಂದರ್ ಮಂಜು ಮನೆ ಕಡೆ ಕಾಲ್ಕಿತ್ತೆವು, ಮನೆಗೆ ಬರುವಷ್ಟರಲ್ಲಿ ಮಧ್ಯರಾತ್ರಿ,✍️ ಬುಕ್ಕಾಪಟ್ಟಣ ರಾಜು,
ಹಾಗೆ ಮರೆಯದೆ ಈ ವಿಡಿಯೋ ನೋಡಿ 👇
0 Comments