ಸ್ನೇಹಿತರೇ ಲಾಕ್ ಡೌನ್ನಿಂದ ಮನೆಯಲ್ಲಿ ಕುಳಿತು ಟವಿ ನೋಡುವುದು ಮೊಬೈಲ್ ನೋಡುವುದು ಮಕ್ಕಳ ಜೊತೆ ಸಣ್ಣ ಪುಟ್ಟ ಆಟ ಆಡುವುದು ಆದ್ರೂ ಟೈಮ್ ಪಾಸ್ ಆಗುತ್ತಿಲ್ಲ ಹೊರಗಡೆ ಹೋಗೋಣ ಎಂದರೆ KOVID- 19 ವೈರಸ್ ಭಯ ಜೊತೆಗೆ ಪೊಲೀಸ್ ಲಾಠಿ ಭಯ ಮೊದಲೆಲ್ಲಾ ಸ್ನೇಹಿತರು ಸಿಕ್ಕಿದರೆ ಟೈಮ್ ಇಲ್ಲ ಮಾತಾಡೋಕ್ಕೆ ಅಂತಿದ್ವಿ ಈಗ ಟೈಮ್ ಇದೆ ಬರ್ರಿ ಮಾತಾಡೋಣ ಅಂದ್ರೆ ಯಾರೂ ಬರಲ್ಲ ಮೊನ್ನೆ ಕುಡಿಯಲು ನೀರು ತರಲು ಕೃಷಿ ಉತ್ಪನ್ನ ಮಾರುಕಟ್ಟೆ ಶಿರಾ (APMC) ಗೆ ಹೋಗಿದ್ದೆ ದೂರದಲ್ಲಿ ಯಾರೋ ಕುಳಿತು ರಾಜು ರಾಜು ಅಂದಂಗಾಯ್ತು ತಿರುಗಿ ನೋಡಿದರೆ ನನಗೆ ಪರಿಚಯಸ್ಥರು ಅವರ ಬಳಿ ಹೋಗಿ ಏನ್ ಸರ್ ಸಮಾಚಾರ ಅಂದೆ ಸಮಾಚಾರ ನೀನು ಹೇಳಬೇಕಾ ನಾವಂತೂ ಮನೆಯಲ್ಲೇ ಇದ್ದೀವಿ ನೀನಾದರೆ ಅಲ್ಲಿ ಇಲ್ಲಿ ಹೋಗ್ತೀಯಾ ಏನ್ ಸಮಾಚಾರ ನೀನೇ ಹೇಳು ಅಂದ್ರು ಏನಿಲ್ಲ ಸಾರ್ ಅಂದೇ ನಾನು ಮಾಸ್ಕ್ ಧರಿಸಿದ್ದೆ ಮಾಸ್ಕ್ .........ಸಮಾಜ ಸೇವಕರು ಕೊಟ್ಟಿದ್ದ ಅಂದ್ರು ಇಲ್ಲಾ ಸಾರ್ ಬೆಂಗಳೂರಿನಿಂದ TBJ ಕಳಿಸಿದ್ರು ಗೆಳೆಯ ಮಧುಸೂದನ್ ಪಟ್ಟನಾಯಕನಹಳ್ಳಿ ಫೋನ್ ಮಾಡಿದ್ರು ನಾನು ಒಂದೆರಡು ತಗೊಂಡು ಬಂದೆ ನಿಮಗೆ ಮಾತ್ರ ನಾ ಅಂದ್ರು ಇಲ್ಲಾ ಸಾರ್ ತಾಲ್ಲೂಕು ಆಡಳಿತದ ಎಲ್ಲ ಅಧಿಕಾರಿಗಳಿಗೆ ಕೊಡುತ್ತಿದ್ದಾರೆ ಪೊಲೀಸ್ ಇಲಾಖೆ ನಗರಸಭೆ ಸಿಬ್ಬಂದಿ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಎಲ್ಲರಿಗೂ ಕೂಡ ತ್ತಿದ್ದಾರೆ ಅಲ್ಲಪ್ಪಾ ಸಿರಾದಲ್ಲಿ ತಾಲ್ಲೂಕಾಡಳಿತ ಅಷ್ಟೇ ನಾ ಇರೋದು ನಾವೆಲ್ಲಾ ಅವರಿಗೆ ಕಾಣಿಸಲ್ವಾ ಅಂದ್ರು ಸಾರ್ ನಾವೆಲ್ಲ ಮನೆಯಲ್ಲಿ ಇರ್ತೇವೆ ತಾಲ್ಲೂಕು ಆಡಳಿತ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಅವರಿಗೆ ಬೇಕಲ್ವಾ ಸಾರ್ ಅಂದೇ ಅಯ್ಯೋ ಬಿಡಪ್ಪ ಅವರು ಕೊಡಲಿಲ್ಲ ಅಂದ್ರೆ......... ಸಮಾಜ ಸೇವಕರು ಕೊಡುತ್ತಿದ್ದಾರೆ ಪ್ರತಿ ಮನೆಗೆ ಪ್ರತಿ ಊರಿಗೆ ಅಂದ್ರು ಯಾರು ಸಾರ್ ಸಮಾಜ ಸೇವಕರು ಅಂದೆ ಏನಪ್ಪಾ ನೀನು ಹೀಗೆ ಹೇಳ್ತಿಯಲ್ಲ ನಿನಗೂ ಪರಿಚಯಸ್ಥರ ಅಲ್ವಾ ಅವರು ಅಂದ್ರು ಒಂದು ಮಾಸ್ಕ್ ಕೊಟ್ಟು ಬೆಲೆನೆ ಕಟ್ಟಲು ಆಗದ ಒಂದು ವೋಟು ಪಡೆಯಲು ಆಡುತ್ತಿರುವ ನಾಟಕ ಸಾರ್ ಅದು ಅಂದೆ ಅದು ಹೇಗೆ ರಾಜು ಅಂದ್ರು ಸರ್ ಸಮಾಜ ಸೇವಕರು ಅಂತ ಹೇಳಿಕೊಂಡು ಸರ್ಕಾರಿ ಶಾಲೆಯ ಮಕ್ಕಳಿಗೆ ಎರಡು ಉಚಿತ ನೋಟ್ ಬುಕ್ ಅನ್ನು ( ಅವರ ಫೋಟೋ ಮುದ್ರಿಸಿ )ಕೊಟ್ಟು ಮಕ್ಕಳ ತಂದೆ ತಾಯಿಗಳ ಹತ್ತಿರ ನಿಮ್ಮ ಮಕ್ಕಳಿಗೆ ನೋಟ್ ಪುಸ್ತಕ ಕೊಟ್ಟಿದ್ದು ನಾವೇ ಎಂದು ಅಮೂಲ್ಯವಾದ ಓಟನ್ನು ಪಡೆದು ಸದಸ್ಯರು ಆದರೂ ಅಧ್ಯಕ್ಷರು ಆದರೂ ಇವರು ಸಮಾಜ ಸೇವಕರಾ ಮೂರು ರೂಪಾಯಿ ಬೆಲೆ ಬಾಳುವ ಎಂಟು ಗಂಟೆ ಬಳಸಲ್ಪಡುವ ಮಾಸ್ಕ್ ಕೊಟ್ಟು ಮುಂದೊಂದು ದಿನ ವೋಟು ಪಡೆಯಲು ನಾಟಕವಾಡುತ್ತಿದ್ದಾರೆ (N-95) ಮಾಸ್ಕಗಳಾದರೆ ಒಂದು ತಿಂಗಳು ಬಳಸಬಹುದು (ಬಿಸಿ ನೀರಿನಲ್ಲಿ ತೊಳೆದು ) ಪ್ರತಿ ಎಂಟು ಗಂಟೆಗೊಮ್ಮೆ ಶಿರಾ ತಾಲ್ಲೂಕಿನ ಎಲ್ಲ ಜನಗಳು ಮಾಸ್ಕ್ಗಳನ್ನು ಇವರು ಪದೇ ಪದೇ ಕೊಡುತ್ತಾರಾ ಸಾರ್ ಒಂದು ಬಾರಿ ಕೊಟ್ಟು ಬರುತ್ತಾರೆ ಅಷ್ಟೇ ಅವರು ಪ್ರಚಾರಕ್ಕೆ ಹೋಗುತ್ತಿದ್ದಾರೆ ಸಮಾಜ ಸೇವಕರು ಎಂದು ನೀವು ಹೇಳುತ್ತಿದ್ದೀರಾ ( TBJ) ಶಿರಾ ತಾಲ್ಲೂಕಿಗೆ ಏನೇನ್ ಕೊಟ್ಟಿದ್ದಾರೆ ಎಂದು ನನ್ನ ಮೊಬೈಲ್ನಲ್ಲಿದ್ದ ಮೆಸೇಜ್ ಅನ್ನು ಓದಿದೆ ಕೇಳಿಸಿಕೊಳ್ಳಿ ಸಾರ್ -2018 ರವರೆಗಿನ ಅವಧಿಯಲ್ಲಿ ಅನುದಾನದ ವಿವರ . 2008-2013 ರವರೆಗೂ 859 ಕೋಟಿ . *ಕಳ್ಳಂಬೆಳ್ಳ-ಮದಲೂರು ಕೆರೆಗೆ ಹೇಮಾವತಿ ಹರಿಯಲು 34 ಕಿ.ಮೀ ನಾಲೆ ನಿರ್ಮಾಣ *ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು. 2013-2018 ರವರೆಗೂ ಅನುದಾನ . 3200 ಕೋಟಿ. * 120 ಬ್ಯಾರೇಜ್, ಪಿಕಪ್, ಚೆಕ್ ಡ್ಯಾಂ. *ಇಡೀ ರಾಜ್ಯದಲ್ಲಿ ಅತಿ ಹೆಚ್ಚು ವಸತಿ ಶಾಲೆಗಳು *ಅತ್ಯಾಧುನಿಕ ವಿದ್ಯಾರ್ಥಿ ನಿಲಯ * ಮಿನಿ ವಿಧಾನಸೌಧ *ತಾಯಿ ಮತ್ತು ಮಕ್ಕಳ ಆಸ್ಪತ್ರೆ * ಎಸ್.ಸಿ ಮತ್ತು ಎಸ್.ಟಿ ಕಾಲೋನಿಗಳಿಗೆ ಸಿ.ಸಿ.ರಸ್ತೆ ಮತ್ತು ಚರಂಡಿ *1200 ಗಂಗಾ ಕಲ್ಯಾಣ ಕೊಳವೆ ಬಾವಿ *ಯು.ಜಿ‌.ಡಿ ಕಾಮಗಾರಿ * ನಗರೋತ್ಥಾನ ಯೋಜನೆಯಡಿ ಶಿರಾ ನಗರದಲ್ಲಿ ರಸ್ತೆ, ಚರಂಡಿ * ಎ.ಪಿ.ಎಂ.ಸಿ ಯಲ್ಲಿ 5000 ಮೆಟ್ರಿಕ್ ಟನ್ ಗೋದಾಮು , 1000 ಮೆಟ್ರಿಕ್ ಟನ್ ಗೋದಾಮು. *ಇಂದಿರಾ ಕ್ಯಾಂಟೀನ್ * ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು * ಬಾಬು ಜಗಜೀವನ್ ರಾಂ ಭವನ, ವಾಲ್ಮೀಕಿ ಭವನ ನಿರ್ಮಾಣ * ತಾಲ್ಲೂಕಿನ ವಿವಿಧ ಭಾಗಗಳಲ್ಲಿ 35 ಯಾತ್ರಿ ನಿವಾಸ , ವಿವಿಧ ದೇವಾಲಯಗಳ ಜೀರ್ಣೋದ್ಧಾರ ಕ್ಕಾಗಿ 35 ಕೋಟಿ ಅನುದಾನ * ಅತ್ಯಾಧುನಿಕ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣ, ಪ್ರಗತಿಯಲ್ಲಿದೆ ಖಾಸಗಿ ಬಸ್ ಅಧುನೀಕರಣ * ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪನೆ *ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ರಸ್ತೆ ನಿರ್ಮಾಣಕ್ಕಾಗಿ ಅನುದಾನ * ಕೆರೆಗಳಿಗೆ ನೀರು .* *1008 ಮನೆ ನಿರ್ಮಾಣ ಸಿರಾ ನಗರ *ಗ್ರಾಮೀಣ ಪ್ರದೇಶದಲ್ಲಿ 2500 ಸಾವಿರ ಹೆಚ್ಚುವರಿ ಮನೆ ನಿರ್ಮಾಣಕ್ಕಾಗಿ ಅನುದಾನ *ರಾಮಕೃಷ್ಣ ಆಶ್ರಮಕ್ಕೆ 4 ಎಕರೆ ಜಮೀನು ಸೇರಿದಂತೆ ವಿವಿಧ ಜಾತಿಯ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಜಮೀನು ಹಂಚಿಕೆ ಪ್ರವಾಸಿ ಮಂದಿರದಲ್ಲಿ ನೂತನ ಕಟ್ಟಡ 100 ಕೊ ಅಧಿಕ ಕುಡಿಯುವ ನೀರಿನ ಘಟಕ ನಾನು ನೀರು ತೆಗೆದುಕೊಂಡು ಹೋಗಲು ಬಂದಿರುವ ಘಟಕ ಅವರ ಅನುದಾನದಲ್ಲಿ ನನಗೆ ಗೊತ್ತಿರುವಷ್ಟು ಹೇಳಿದ್ದೇನೆ ಸರ್ ಅಂದೆ 'SORRY ರಾಜು TBJ ಇಷ್ಟು ಕೆಲಸ ಮಾಡಿಸಿದ್ದಾರೆಂದು ನನಗೆ ಗೊತ್ತಿರಲಿಲ್ಲ ಇನ್ನು ಮುಂದೆ ನಾನು ಸಹ TBJ ಅಭಿಮಾನಿ ಯಾಗುತ್ತೇನೆ ಅಂದರು ಒಂದು ಮಾಸ್ಕ ಎರಡು ನೋಟ್ ಪುಸ್ತಕ ಕೊಡುವವರು ಸಮಾಜ ಸೇವಕರು ಅನ್ನುತ್ತಾರೆ ಜನ ಶಿರಾ ತಾಲ್ಲೂಕಿಗೆ ಇಷ್ಟು ಅನುದಾನ ಕೆಲಸ ಮಾಡಿಸಿದ TBJ ಗೆ ಏನೆನ್ನಬೇಕು .............. ನಲವತ್ತು ನಿಮಿಷಗಳ ನಂತರ ಈಗ ಹೇಳಿ ಸಾರ್ TBJ ಅಭಿಮಾನಿಗಳಿಗೆ ಹೇಳಲಾ ನಿಮಗೆ ಮಾಸ್ಕ್ ಕೊಡಲು ಬೇಡ ರಾಜು ನನ್ನ ಸ್ವಂತ ಹಣದಲ್ಲಿ TBJ ಹೆಸರು ಹೇಳಿ ನಾನೇ ಹಂಚುತ್ತೇನೆ ಎಂದರು ಮನೆಗೆ ಬಂದೆ ತುಂಬಾ ಸಮಯ ಆಗಿದ್ದರಿಂದ ಮನೆಯಲ್ಲಿ ನೀರು ತರಲು ಏನು ಹೇಮಾವತಿ ಡ್ಯಾಂಗೆ ಹೋಗಿದ್ದ ಎಂದರು ಹೌದು TBJ ಯವರನ್ನು ಶಿರಾ ಜನತೆ next election ನಲ್ಲಿ ಕಳೆದುಕೊಂಡರೆ ಹೇಮಾವತಿ ಡ್ಯಾಂಗೆ ಹೋಗಬೇಕಾಗುತ್ತದೆ ಎಂದೇ ರಾತ್ರಿ ನೆನಪು ಬಂತು ಹಾಗೇ ಸುಮ್ಮನೆ ಗೀಚಿದೆ ✍️ಬುಕ್ಕಾ ಪಟ್ಟಣ ರಾಜು,