ಇಂದು ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸಿರಾ ನಗರದ ಸೀಲ್ ಡೌನ್ ಏರಿಯಾ ಆದ ಬೇಗಂ ಮೋಹಲ್ಲಾವನ್ನು ವೀಕ್ಷಿಸಿದರು.. ಹಾಗೂ ಈ ಸಂದರ್ಭದಲ್ಲಿ ಇನ್ನು ಹೆಚ್ಚಿನ ಬಿಗಿ ಬಂದೋಬಸ್ತ ಹಾಗೂ ಕಟ್ಟೆಚ್ಚರವನ್ನು ವಹಿಸಲು ಹಾಗೂ ಸಾರ್ವಜನಿಕರ ಅನಗತ್ಯ ಓಡಾಟವನ್ನು ನಿಯಂತ್ರಿಸಲು ಸಲಹೆ ಸೂಚನೆಗಳನ್ನು ನೀಡಿದರು.. ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲು ತಿಳಿಸಲಾಗಿದೆ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಲವು ಉದ್ಯಮಿಗಳು, ದಾನಿಗಳು ನಗರದಾದ್ಯಂತ ಸಾಮಗ್ರಿಗಳನ್ನು ವಿತರಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿ ಈ ಬಗ್ಗೆ ತಾಲ್ಲೂಕು ಆಡಳಿತವು ಅಂತಹಾ ದಾನಿಗಳಿಂದ ಆಹಾರ ದಾನ್ಯಗಳನ್ನು ಪಡೆದು ಒಂದೆಡೆ ಸಂಗ್ರಹಿಸಿ ಅಂತಹ ದಾನಿಗಳಿಗೆ ಸೂಕ್ತ ರಶೀದಿ ನೀಡಲು ಹಾಗೂ ದಾಸ್ತಾನುಗಳನ್ನ ಅರ್ಹ ನಿಜವಾದ ಫಲಾನುಭವಿಗಳನ್ನು ಗುರ್ತಿಸಿ ( ಈಗಾಗಲೇ ಗ್ರಾಮವಾರು ಪಟ್ಟಿವನಮ್ಮಲ್ಲಿದೆ) ನಮ್ಮ ಸಿಬ್ಬಂದಿಗಳ‌ನ್ನು ಸದರಿ ದಾನಿಗಳೊಂದಿಗೆ ಸೇರಿಸಿ ನಮ್ಮ ಮುಖಾಂತರವೇ ವಿತರಿಸಲು ಸೂಕ್ತ ಏರ್ಪಾಡು ಮಾಡಿಕೊಳ್ಳಲು ತಿಳಿಸಿದರು... ಪ್ರಯುಕ್ತ ಇನ್ನು ಮುಂದೆ ಸಾರ್ವಜನಿಕರು ಹಾಗೂ ದಾನಿಗಳು ಯಾವುದೇ ಪ್ರಕಾರದ ದಾನ ನೀಡ ಬಯಸುವವರು ತಾಲ್ಲೂಕು‌ ಕಛೇರಿಯಲ್ಲಿ ನೀಡಲು ಹಾಗೂ ಸೂಕ್ತ ರಶೀದಿ ಪಡೆಯಲು ಮತ್ತು ವಿತರಣೆ ಮಾಡುವ ಸ್ಥಳಕ್ಕೆ ಆಗಮಿಸಲು ಸಹ ತಿಳಿಸಲಾಗುತ್ತದೆ... ಇದರಿಂದ ಈಗಾಗಲೇ ಆಹಾರ ಸಾಮಗ್ರಿಗಳನ್ನು ಪಡೆದಿರುವವರೇ ಮತ್ತೊಮ್ಮೆ, ಮಗದೊಮ್ಮೆ ಪಡೆಯುವ ಸಾದ್ಯತೆ ಕಡಿಮೆಯಿರುತ್ತದೆ.. ಪ್ರತಿ ಗ್ರಾಮ ಪಂಚಾಯ್ತಿಯ ಟಾಸ್ಕ್ ಫೋರ್ಸ್ ಸಮಿತಿಯಿಂದ ಪ್ರತಿಯೊಂದು ಹಳ್ಳಿಯಲ್ಲಿನ ನಿರ್ಗತಿಕರ(:ಪಡಿತರ ಚೀಟಿ ಹೊಂದಿಲ್ಲದೆಬಿರುವ ಅಲೆಮಾರಿಗಳು, ತೀರಾ ನಿರಾಶ್ರಿತ ವಲಸೆ ಕಾರ್ಮಿ ಕರು) ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ.. ಅಂತಹಾ ಕುಟುಂಬಗಳಿಗೆ ನಿಜವಾದ ಆಹಾರ ಸಾಮಗ್ರಿಗಳ ಅವಶ್ಯಕತೆಯಿದೆ.. #ಹಸಿದ ಹೊಟ್ಟೆಗೆ ಅನ್ನ ನೀಡೋಣ ಎನ್ನುವುದಷ್ಟೆ ತಾಲ್ಲೂಕು ಆಡಳಿತದ ಉದ್ದೇಶ