Widget Recent Post No.

ಕಲ್ಪತರು ನಾಡಿಗೆ ತಪ್ಪದ ಮುಂಬೈ ನಂಜು..!ಇಂದು ಒಂದೇ ದಿನದಲ್ಲಿ 9 ಹೊಸ ಪ್ರಕರಣ

ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು ಇಂದು ಒಂದೇ ದಿನದಲ್ಲಿ 9 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ 9 ಪ್ರಕರಣಗಳಲ್ಲಿ 6 ಮಂದಿ ಮುಂಬೈನಿಂದ ಆಗಮಿಸಿದ್ದರು. 39 ವರ್ಷದ ಪುರುಷ, 29 ವರ್ಷದ ಮಹಿಳೆಗೆ, 10,21,08 ವರ್ಷದ ಗಂಡು ಮಕ್ಕಳಿಗೆ ಹಾಗು 60 ವರ್ಷದ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹೇಗೆ ಸೋಂಕು ಹರಡಿದೆ ಎಂಬುದನ್ನ ಇನ್ನ ತನಿಖೆ ನಡೆಸಲಾಗುತ್ತಿದೆ.

ಸೋಂಕಿತರನ್ನ ಈಗಾಗಲೇ ಪ್ರತ್ಯೇಕವಾಗಿಸಿ, ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಮೇಲೆ ಆರೋಗ್ಯಾಧಿಕಾರಿಗಳು ನಿಗಾ ವಹಿಸಿದ್ದಾರೆ

Post a Comment

0 Comments