ಕೇಂದ್ರ ಸರ್ಕಾರ 4ನೇ ಹಂತಕ್ಕೆ ಲಾಕ್ ಡೌನ್ ಮುಂದುವರಿಸಿದ್ದು ಕೆಲ ನಿಯಮಗಳನ್ನು ಸಡಲಿಕೆ ಮಾಡಿದೆ ಸಾರ್ವಜನಿಕರು ಮುನ್ನೆಚ್ಚರಿಕೆ ದೃಷ್ಟಿಯಿಂದ ಹೊರಗಡೆ ಹೋಗುವಾಗ ಮಾಸ್ ಕಡ್ಡಾಯವಾಗಿ ಧರಿಸಬೇಕು ಅಂತ ಹೇಳಿದೆ.  ಶಿರಾ ನಗರದಲ್ಲಿ ಮಾಸ್ಕ್ ಧರಿಸಿದವರಿಗೆ ದಂಡ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.

ಲಾಕ್ ಡೌನ್ ಸಡಲಿಕೆ ನಂತರ ಶಿರಾ ನಗರದಲ್ಲಿ ಬಹುತೇಕ ಜನ  ಮಾಸ್ಕ್ ಇಲ್ಲದೆ ರಸ್ತೆ ಗೆ ಇಳಿಯುತ್ತಿದ್ದಾರೆ ಅಂಗಡಿ ಮಾಲೀಕರು ಮತ್ತು ವ್ಯಾಪಾರಸ್ಥರು ಕೂಡ ಧರಿಸದೆ ವ್ಯಾಪಾರ ನಡೆಸುತ್ತಿದ್ದು ಕಂಡುಬಂದಿದೆ ಇಂತಹ ಅಂಗಡಿಗಳಿಗೆ ಬಿಸಿ ಮುಟ್ಟಿಸಲು ಶಿರಾ ನಗರದಲ್ಲಿ ತಾಸಿಲ್ದಾರ್ ನಾಹಿದ ಜಮ್ ಜಮ್ ಹಾಗು  ಪೊಲೀಸ್ ಇನ್ಸ್ಪೆಕ್ಟರ್ ಭಾರತಿ ಅವರು ಜಂಟಿ ಕಾರ್ಯಾಚರಣೆ ನಡೆಸಿ ಮಾಸ್ಕ ಧರಿಸಿದವರಿಗೆ ದಂಡ ವಿಧಿಸಲಾಗಿದೆ.

ಸದ್ಯ ತುಮಕೂರು ಜಿಲ್ಲೆ ಆರೆಂಜ್ ಪ್ರದೇಶವಾಗಿದೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ದೃಷ್ಟಿಯಿಂದ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ಶಿರಾ ತಾಲ್ಲೂಕು ಆಡಳಿತ ಮುಂದಾಗಿದೆ ಹೀಗಾಗಿ ಮಾಸ್ಕ್ ಇಲ್ಲದೆ  ಓಡಾಡುವ ಸಾರ್ವಜನಿಕರಿಗೆ ವಾಹನ ಸವಾರರಿಗೆ ಮತ್ತು ವ್ಯಾಪಾರಸ್ಥರಿಗೆ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಿದ್ದಾರೆ..