#ಅಮ್ಮನ #ಧೈರ್ಯವೇ #ನನಗೆ #ಸ್ಪೂರ್ತಿ.....
#ಅಮ್ಮ ಎಂಬ ಪದವೇ ಚಂದ......
ಅಮ್ಮ ಎಂದರೆ ಏನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವು.... ಎಂಬ ಹಾಡನ್ನು ಪ್ರತಿಯೊಬ್ಬ ಮಕ್ಕಳು ಒಂದಲ್ಲ ಒಂದು ಸಲ ಗುನುಗುಡಿಯೇ ಇರುತ್ತಾರೆ.ಕಣ್ಣಿಗೆ ಕಾಣುವ ದೇವರೆಂದೇ ಅಮ್ಮ ಪ್ರಸಿದ್ದಿ...ಅಮ್ಮ ಕರುಣಾಮಯಿ,ಅಮ್ಮ ತ್ಯಾಗಮಯಿ, ಹೀಗೆ ಅಮ್ಮನನ್ನು ವರ್ಣಿಸಲುಪದಗಳೇ ಸಾಲೋದಿಲ್ಲ. ಕೇವಲ ಒಂದು ಲೇಖನ ಅಥವಾ ಕವನದಿಂದ ಅಮ್ಮನ ಬಣ್ಣನೆ ವರ್ಣನೆ ಅಸಾದ್ಯ... ತಾಳ್ಮೆಯ ಪ್ರತೀಕ, ಮಮತಾಮಯಿ,, ಉದಾರತೆಯ ಮೂರ್ತಿ,, ಆಗಿರುವಂತಹ ನನ್ನ ಮುದ್ದು ಅಮ್ಮ ಸುಶೀಲಾಳ ಬಗ್ಗೆ ಬರೆಯಲು ನನಗಂತೂ ಎಲ್ಲಿಲ್ಲದ ಹೆಮ್ಮೆ...ಅಮ್ಮ ಎಂಬ ಎರಡಕ್ಷರದಲ್ಲಿ ಅಡಗಿದೆ ಒಂದು ವಿಶೇಷ ಶಕ್ತಿ..ಮಮತೆ,ಪ್ರೀತಿ,ಕರುಣೆ,ವಾತ್ಸಲ್ಯ, ಇವೆಲ್ಲವುಗಳ ಒಗ್ಗೂಡಿಕೆಯೇ ನನ್ನಮ್ಮ....ಅಪ್ಪ ಗದರಿದಾಗ ಅಥವಾ ಹೊಡೆಯುವಾಗ ಒಂದು ಮಗು ಅಮ್ಮನ ಮಡಿಲಲ್ಲಿ ತನ್ನ ರಕ್ಷಣೆ ಮಾಡಿಕೊಳ್ಳುತ್ತದೆ. ಅಮ್ಮನ ಮಡಿಲೇ ಸ್ವರ್ಗ ಎಂದು ಹೇಳುತ್ತಾರೆ. ಆದ್ದರಿಂದ ಅಮ್ಮನ ಮಡಿಲಿಗಿಂತ ಹೆಚ್ಚಿನ ರಕ್ಷಣೆ ನಮಗೆಲ್ಲಿ ಸಿಗುತ್ತದೆ ಹೇಳಿ,,,?ಅಮ್ಮನ ಮಡಿಲಿಗೆ ಇಷ್ಟು ಶಕ್ತಿ, ಧೈರ್ಯ ಇರಬೇಕಾದರೆ ಇನ್ನೂ ನನ್ನ ಅಮ್ಮನಿಗೆ ಶಕ್ತಿ ಏಷ್ಟಿರಬೇಕು ನೀವೆ ಹೇಳಿ? ಅಮ್ಮನ ಆಶೀರ್ವಾದವೇ ನಮಗೇ ಶ್ರೀರಕ್ಷೆ...ಮನೆಯ ಎಂತಹ ಪರಿಸ್ತಿತಿಯಲ್ಲೂ ಸಹ ಮನೆ ನಿಭಾಯಿಸುವ ಕಲೆಯನ್ನು ನಾವು ಮೆಚ್ಚಲೇಬೇಕು. ಸುಶೀಲಾ ಎಂಬ ಹೆಸಿರಿಗೆ ತಕ್ಕಂತೆ ನನ್ನ ಅಮ್ಮ ಸುಶೀಲೆ,ಸುಗುಣಶೀಲೆ ಸಂಪನ್ನೆ..ಎಲ್ಲರ ಒಳಿತನ್ನೇ ಬಯಸುವವಳು ನನ್ನ ಅಮ್ಮ... ನನ್ನ ಬದುಕಿಗೆ ಸ್ಪೂರ್ತಿ ನೀಡಿದಾಕೆ ನನ್ನ ಅಮ್ಮ. ತಾನು ಕಳೆದುಕೊಂಡಂತಹ ತಾನು ಅನುಭವಿಸಲಾರದಂತಹ ಸುಖ ಸಂತೋಷಗಳನ್ನು ತನ್ನ ಮಕ್ಕಳಿಗಾದರೂ ನೀಡಬೇಕು ಎಂದು ತನ್ನ ಜೀವನದ ಸುಖ ಸಂತೋಷಗಳನ್ನೆಲ್ಲ ಮುಡಿಪಾಗಿಟ್ಟು ಎಂಹ ಕಷ್ಟವೇ ಬರಲಿ ಸುಖವೇ ಇರಲಿ, ಯಾವುದೇ ಸಂದರ್ಬದಲ್ಲೂ ತನ್ನ ನಾಲ್ಕು ಮಕ್ಕಳ ಏಳ್ಗೆಗಾಗಿ, ಅವರ ಉನ್ನತಿಗಾಗಿ, ಅವರ ಸುಖಸಂತೋಷಕ್ಕಾಗಿ ತನ್ನ ನೋವನ್ನೆಲ್ಲ ತಾನೇ ನುಂಗಿ ನಮಗೆಲ್ಲ ಅಂದರೆ ನಾನು , ನನ್ನ ತಮ್ಮ, ನನ್ನ ತಂಗಿಯರಿಗೆ ಇಂದು ಒಂದು ಸುಂದರವಾದ, ಸುಖಕರವಾದ, ಕುಟುಂಬ ಕಟ್ಟಿಕೊಟ್ಟ ಹೆಮ್ಮೆ ನನ್ನ ಅಮ್ಮನದು,,ನನ್ನ ಅಮ್ಮನಿಗೊಂದು ಪ್ರೀತಿ ಪೂರ್ವಕ ನಮನ...
ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ನನ್ನ ಅಮ್ಮ ನನ್ನ ಅಪ್ಪನ ಮನೆಗೆ ಬಂದು ಪ್ರಾರಂಭದಲ್ಲಿ ಕಷ್ಟದ ಜೀವನವನ್ನು ಕಂಡಿದ್ದಾರೆ,ಆದರೆ ಧೈರ್ಯಗೆಡದೆ, ಅಂಜದೇ, ಅಳುಕದೇ, ಭವಿಷ್ಯದಲ್ಲಾದರೂ ಮಕ್ಕಳ ಕಾಲ್ಗುಣದಿಂದ ಒಳ್ಳೆಯ ಸುಖಕರವಾದ ಜೀವನ ಸಿಗಬಹುದೆಂದು ಆಶಾಭಾವನೆಯಿಂದ ಬದುಕಿದಾಕೆ ನನ್ನ ಅಮ್ಮ.. ನಮಗೆಲ್ಲರಿಗೂ ಅದೇ ಪಾಠವನ್ನು ಕಲಿಸಿದ್ದಾರೆ. ಕಷ್ಟ ಬಂದಾಗ ಧೃತಿಗೆಡದೇ, ಕಷ್ಟ ಬಂದಾಗ ಕುಗ್ಗದೇ ಏಕಚಿತ್ತದಿಂದ ಧೈರ್ಯದಿಂದ ಎಲ್ಲವನ್ನು ನಿಭಾಯಿಸುವ ಅಮ್ಮನ ಈ ಗುಣವೇ ನನಗೆ ಸ್ಪೂರ್ತಿ.... ನಮ್ಮದು ಚಿಕ್ಕ ಹಳ್ಳಿ. ಅಲ್ಲಿ ನಾಲ್ಕಾರು ಮಂದಿಗೆ ನನ್ನ ಅಮ್ಮ ಸ್ಪೂರ್ತಿಯಾಗಿದ್ದಾಳೆ. ಇದ್ದರೆ ಗೌಡ್ರ ಸುಶೀಲಕ್ಕನ ತರಹ ಇರಬೇಕು ನೋಡ್ರಿ ಎಂದು ಊರಿನಲ್ಲಿರುವ ಹೆಣ್ಮಕ್ಕಳು ಮಾತನಾಡಿಕೊಳ್ತಾರೆ. ಇಂತಹ ಮಾತುಗಳು ನಮ್ಮ ಕಿವಿಗೆ ಬಿದ್ದಾಗ ಆಗುವ ಹೆಮ್ಮೆ ಬಹಳ ದೊಡ್ಡದು...ಇಂತವರ ಹೊಟ್ಟೆಯಲ್ಲಿ ಹುಟ್ಟಿದ ನಾವುಗಳೇ ಧನ್ಯರು...ಕಷ್ಟ ಅಂತಾ ಯಾರಾದರು ಮನೆಬಾಗಿಲಿಗೆ ಬಂದರೆ ನನ್ನ ಅಮ್ಮ ಅವರನ್ನು ಹಾಗೆ ಕಳುಹಿಸಿದ ದಾಖಲೆಯೇ ಇಲ್ಲ. ಇದು ಕೂಡ ನನಗೆ ಸ್ಪೂರ್ತೀಯೆ ಸರಿ... ಹೀಗೇ ಮುಂದುವರಿದರೆ ಅಮ್ಮನ ಸ್ಪೂರ್ತಿಯ ಗುಣಗಳ ಪಟ್ಟಿಯು ಬೆಳೆಯುತ್ತಲೇ ಇರುತ್ತದೆ ಅದು ಮುಗಿಯುವಂತದ್ದಲ್ಲ.... ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಪತ್ರಿಕಾ ಸಂದರ್ಶನದಲ್ಲಿ ತಮ್ಮ ತಾಯಿಯವರ ಬಗ್ಗೆ ಹೇಳಿದ್ದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ... ನಾನು ಇವತ್ತು ಪ್ರಧಾನ ಮಂತ್ರಿಯಾಗಿದ್ದೇನೆ ಅಂದರೆ ಅದಕ್ಕೆ ಕಾರಣ ನನ್ನ ತಾಯಿ. ೧೯೮೯ರಲ್ಲಿ ನನ್ನ ತಂದೆ ತೀರಿಕೊಂಡರು. ಆಗ ಆರು ಮಂದಿ ಮಕ್ಕಳ ಜವಾಬ್ದಾರಿ ನನ್ನ ತಾಯಿಯ ಹೆಗಲ ಮೇಲೆ ಬಿತ್ತು.ಆಗ ನಾವೇನು ಅಷ್ಟೊಂದು ಅನುಕೂಲಸ್ಥರಾಗಿರಲಿಲ್ಲ. ಆದರೆ ನನ್ನ ತಾಯಿ ಧೃತಿಗೆಡಲಿಲ್ಲ. ಅಂಜಲಿಲ್ಲ. ಅಕ್ಕಪಕ್ಕದ ಮನೆಗೆ ಪಾತ್ರೆ ತೊಳೆಯುವ ಕೆಲಸಕ್ಕೆ ಹೋಗುತ್ತಿದ್ದರು. ಗಾರ್ಡನ್ಗಳಿಗೆ ನೀರು ಹಾಕಲು ಹೋಗುತ್ತಿದ್ದರು. ಕೂಲಿ ಮಾಡಿ ನಮ್ಮನ್ನೆಲ್ಲ ಸಾಕಿದ್ದಾರೆ. ಎಲ್ಲಾ ಕಷ್ಟಗಳನ್ನು ನುಂಗಿಕೊಂಡು ಮಕ್ಕಳಿಗೆ ಒಂದಿಷ್ಟು ನೋವಾಗದಂತೆ ,ನೋವು ತಿಳಿಯದಂತೆ ನೋಡಿಕೊಳ್ಳುವ ಗುಣ ಇರುವುದು ತಾಯಿಗೆ ಮಾತ್ರ. ಇದು ನನ್ನ ತಾಯಿಯ ಗುಣ ಮಾತ್ರವಲ್ಲ. ಎಲ್ಲ ತಾಯಂದಿರ ಗುಣವೇ ಅಂತದ್ದು. ನನ್ನ ಅಮ್ಮನಿಗೆ ಈಗ ತೊಂಬತ್ತು ವರುಷ.ಆದರೆ ಯಾವ ಕೆಲಸಕ್ಕೂ ಯಾರ ಮೇಲೂ ಅವಲಂಬಿತವಾಗಿಲ್ಲ. ಪ್ರತಿಯೊಂದು ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ಶಾಲೆಯ ಮೆಟ್ಟಲು ಏರದಿದ್ದರೂ ಸಹ ಜಗತ್ತಿನ ಪ್ರತಿಯೊಂದು ಆಗುಹೋಗು ನನ್ನ ತಾಯಿಗೆ ಗೊತ್ತು. ಎಲ್ಲವನ್ನು ಟಿ.ವಿ ಮುಖಾಂತರ ತಿಳಿದುಕೊಳ್ಳುತ್ತಾರೆ. ನಾನು ಪ್ರಧಾನ ಮಂತ್ರಿಯಾದರೂ ಸಹ ನನ್ನ ತಾಯಿ ಮಾತ್ರ ಇನ್ನೂ ಚಿಕ್ಕ ಮನೆಯಲ್ಲಿಯೇ ಇದ್ದಾರೆ. ಇಂತಹ ತಾಯಿಯನ್ನು ಪಡೆದ ನಾನೇ ಧನ್ಯ ಎಂದು ಮಾನ್ಯ ಪ್ರಧಾನಮಂತ್ರಿಗಳು ಒಂದು ಪತ್ರಿಕಾ ಸಂದರ್ಶನದಲ್ಲಿ ಬಹಳ ಅರ್ಥಪೂರ್ಣವಾಗಿ ತಮ್ಮ ತಾಯಿಯವರ ಗುಣಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದರಿಂದ ಅವರು ತಮ್ಮ ತಾಯಿಯವರನ್ನು ಒಂದು ಮಹಾನ್ ಸ್ಪೂರ್ತಿಯನ್ನಾಗಿ ಮಾಡಿಕೊಂಡು ಅವರಿಂದ, ಮತ್ತು ಅವರ ಆಶೀರ್ವಾದದಿಂದ ಇವತ್ತು ನಮ್ಮ ದೇಶದ ಒಂದು ಅತ್ಯುನ್ನತ ಸ್ಥಾನದಲ್ಲಿದ್ದಾರೆ ಇದ್ದಾರೆ ಎಂದರೆ ತಪ್ಪಾಗಲಾರದು. ಮಕ್ಕಳು ಏಷ್ಟೇ ಬೆಳೆದರೂ, ದೊಡ್ಡವರಾದರೂ, ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಸಹ ತಾಯಿಯ ಮಮತೆ ಪ್ರೀತಿ ತುಂಬಿದ ಆಶೀರ್ವಾದ ಮತ್ತು ತಾಯಿಯಲ್ಲಿರುವ ಧೈರ್ಯವೇ ಆ ಮಕ್ಕಳಿಗೆ ಸ್ಪೂರ್ತಿ ಅಂತಾ ಹೇಳಬಹುದು.ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ... ಅಮ್ಮಾ,,, ಅಮ್ಮಾ,,, ಅಮ್ಮಾ ನಮ್ಮಮ್ಮ.... ಆಯ್ ಲವ್ ಯು❤️
0 Comments