ಮಾನವೀಯತೆ ಮೌಲ್ಯಗಳನ್ನು ಕಳೆದುಕೊಂಡ ಸಿರಾ ದ ಕೆಲವು ದಿನಸಿ ಅಂಗಡಿಗಳು ಮಾನವೀಯತೆ ಮೌಲ್ಯಗಳನ್ನು ಕಳೆದುಕೊಂಡ ಸಿರಾ ದ ಕೆಲವು ದಿನಸಿ ಅಂಗಡಿಗಳು # . ಅಂಗನವಾಡಿಯಲ್ಲಿ ಶಾಲೆ ಕಲಿಯುತ್ತಿರುವ ಸಣ್ಣ ಮಗು ತನ್ನ ತಾಯಿಯನ್ನು ಅಮ್ಮ ಪಾಯಸ ಮಾಡಮ್ಮ ಎಂದು ಕೇಳಿಕೊಂಡಳು ತಾಯಿ ಸರಿ ಮಗಳೇ ಹೊರಗೆ ಹೋಗುವ ಹಾಗಿಲ್ಲ ಸಂಜೆ ಸಕ್ಕರೆ ಶ್ಯಾವಿಗೆ ತೆಗೆದುಕೊಂಡು ಬಂದು ಪಾಯಸ ಮಾಡುತ್ತೇನೆ ಎಂದು ತನ್ನ ಮಗುವಿಗೆ ಸಮಾಧಾನ ಮಾಡುತ್ತಾಳೆ ಸಂಜೆ ಆಗುವುದನ್ನು ಕಾಯುವ ಮಗು ಸೂರ್ಯ ನಾ ಸಂಜೆ ಕೆಂಪು ಬೆಳಕು ಕಂಡಾಕ್ಷಣ ಅಮ್ಮ ಅಂಗಡಿಗೆ ಹೋಗಮ್ಮ ಎಂದಳು ತಾಯಿ ತನ್ನ ಬೀದಿಯ ಮೂಲೆ ಮನೆ ಅಂಗಡಿಗೆ ಹೋಗಿ ದಿನಸಿ ಸಾಮಗ್ರಿಗಳ ಬೆಲೆ ಕೇಳಿದರೆ ಒಂದು ವಾರದ ಹಿಂದೆ ಇದ್ದ ಬೆಲೆ ಈಗ ಎರಡು ಪಟ್ಟು ಜಾಸ್ತಿಯಾಗಿದೆ ಎಂದು ಅಂಗಡಿ ಮಾಲೀಕ ಯಾಕೆ ಮಾಲೀಕರೇ ಬೆಲೆ ಜಾಸ್ತಿ ಹೇಳುತ್ತೀರಾ ನಾವು ಬಡವರು ಈಗಲೇ ಕೆಲಸ ಇಲ್ಲ ಮಾಲೀಕ ಆಹಾರ ಸಾಮಗ್ರಿಗಳ ಸರಬರಾಜು ಇಲ್ಲ ಆದ್ದರಿಂದ ನಾವು ಬೆಳೆಗಳನ್ನು ಜಾಸ್ತಿ ಬೆಲೆಗೆ ಮಾರುತ್ತಿದ್ದೇವೆ ನಿಮಗೆ ಬೇಕಾದರೆ ತೆಗೆದುಕೊಳ್ಳಿ ಇಲ್ಲಾಂದರೆ ಮುಂದೆ ಹೋಗಿ ಅಲ್ಲಾ ಮಾಲೀಕರೇ ಮೂವತ್ತು ವರ್ಷಗಳಿಂದ ನಿಮ್ಮ ಅಂಗಡಿಯಲ್ಲೇ ಸಾಮಗ್ರಿಗಳನ್ನು ಖರೀದಿಸುತ್ತಿದ್ದೇವೆ ಕಷ್ಟದ ಸಮಯದಲ್ಲೂ ಆಹಾರ ಸಾಮಗ್ರಿಗಳ ಬೆಲೆ ದುಪ್ಪಟ್ಟು ಮಾಡಿದ್ದೀರಲ್ಲ ಏನು ಮಾಡುವುದು ತಾಯಿ ನಾನು ಬಂಡವಾಳ ಹಾಕಿರುವ ಅಂಗಡಿಗೆ ಯಾವುದೋ ಇಲಾಖೆಯಿಂದ ಪಾಸ್ ಪಡೆಯಬೇಕಂತೆ ಪಾಸ್ ಪಡೆಯಲು ಹಣ ಕೊಟ್ಟಿರುತ್ತೇನೆ ಅಲ್ಲಿ ಕೊಟ್ಟಿರುವ ಹಣ ಇಲ್ಲಿ ಗ್ರಾಹಕರ ಮೇಲೆ ಹಾಕಬೇಕಲ್ಲವೇ . ಒಂದು ಕೆಜಿ ಸಕ್ಕರೆ ಮತ್ತು ಒಂದು ಕೆಜಿ ಶ್ಯಾವಿಗೆ ಪಡೆಯಲು ಬಂದ ತಾಯಿ ಅರ್ಧ ಕೆಜಿ ಪಡೆದು ಮನೆಗೆ ಹೋದಳು ತನ್ನ ಮಗುವಿನ ಆಸೆ ಈಡೇರಿಸಿದರು ಪ್ರಪಂಚದಲ್ಲಿ ತಾಯಿ ಅಮ್ಮ ಎನ್ನುವ ದೇವತೆ ತನ್ನ ಮಕ್ಕಳಿಗೆ ಮಾತು ಕೊಟ್ಟರೆ ಆಹಾರ ಸಾಮಗ್ರಿಗಳ ಬೆಲೆ ನೊರು ಪಟ್ಟು ಜಾಸ್ತಿ ಆದರೂ ಸಹಾ ತನ್ನ ರಕ್ತವನ್ನಾದರೂ ಮಾರಿ ತನ್ನ ಮಕ್ಕಳ ಆಸೆ ಈಡೇರಿಸುತ್ತಾಳೆ ...... ಆದರೆ ಲಾಕ್ಡೌನ್ ಅನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ದಿನಸಿ ಅಂಗಡಿ ಮಾಲೀಕರನ್ನು ಏನೆನ್ನಬೇಕು ? ಸಾರ್ವಜನಿಕರೆ ಸ್ನೇಹಿತರೆ ಅಕ್ಕ ತಂಗಿಯರು ಅಣ್ಣ ತಮ್ಮಂದಿರು ತಂದೆ ತಾಯಿಗಳು ನೀವು ಸಹ ಆಹಾರ ಸಾಮಗ್ರಿಗಳನ್ನು ತರಲು ಅಂಗಡಿಗೆ ಹೋದಾಗ ದುಪ್ಪಟ್ಟ ಬೆಲೆಗೆ ಸಾಮಗ್ರಿಗಳನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಿ ಅಂಗಡಿ ಮಾಲೀಕನಿಗೆ ಬುದ್ಧಿ ಕಲಿಸಿ ನಿಮ್ಮಿಂದ ಕೆಲವು ಬಡ ತಾಯಂದಿರಿಗೆ ಅನುಕೂಲವಾಗುತ್ತದೆ ಸಂಬಂಧಪಟ್ಟ ಇಲಾಖೆಗೆ ಹೇಳಿದರೂ ಪ್ರಯೋಜನವಿಲ್ಲ ಯಾಕೆಂದರೆ ಇಲಾಖೆಯ ಕೆಲವು ಅಧಿಕಾರಿಗಳು ಅಂಗಡಿ ಮಾಲೀಕರ ಜೊತೆ ಕೈಜೋಡಿಸಿದ್ದಾರೆ ಭಾರತ ದೇಶದ ಗಡಿ ಕಾಯುವವರು ಮಾತ್ರ ಯೋಧ ಎಂದು ನಾವು ಸುಮ್ಮನಿದ್ದರೆ ಆಗುವುದಿಲ್ಲ ಭಾರತ ದೇಶದ ಒಳಗೂ ಸಹ ಪ್ರತಿಯೊಬ್ಬ ಪ್ರಜೆಗಳು ಸೈನಿಕರಾಗಬೇಕು ಕೊರೊನಾ ವೈರಸ್ ನಿಂದ ಕೆಲಸವಿಲ್ಲದೆ ಲಾಕ್ ಡೌನ್ ಅನುಭವಿಸುತ್ತಿರುವ ನಮಗೆ ಇದನ್ನೇ ಬಂಡವಾಳ ಮಾಡಿಕೊಂಡ ಅಂಗಡಿ ಮಾಲೀಕರಿಗೆ ಬುದ್ಧಿ ಕಲಿಸಬೇಕು (ಕೆಲವು ಅಂಗಡಿ ಮಾಲೀಕರು ನಮ್ಮ ಹತ್ತಿರ ಪಾಸ್ ಇದೇ ಎಂದು ಬೆಳಗ್ಗಿನಿಂದ ರಾತ್ರಿ ವರೆಗೂ ಅಂಗಡಿ ಮುಂಗಟ್ಟುಗಳನ್ನು ತೆಗೆದುಕೊಂಡು ಸಾಮಾಜಿಕ ಅಂತರವನ್ನು ಕಾಪಾಡದೆ ವ್ಯವಹರಿಸುತ್ತಿದ್ದಾರೆ ನಮ್ಮನ್ನು ಯಾರೂ ಕೇಳುವುದಿಲ್ಲ ಎಂಬ ಭಾವನೆಯಲ್ಲಿದ್ದಾರೆ ಸಂಬಂಧಪಟ್ಟ ಇಲಾಖೆಯವರು ಕೇಳದಿದ್ದರೂ ಪರವಾಗಿಲ್ಲ ಸಾರ್ವಜನಿಕರೇ ನೀವೇ ಕೇಳಿ # ಜೈ ಹಿಂದ್ ✍️ ಬುಕ್ಕಾಪಟ್ಟಣ ರಾಜು, ತಾಲೂಕಿನ ಮತ್ತಷ್ಟು ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ Follow us on = Facebook:-SIRA_FB_TV Youtube:-SIRA FB TV