ಅಕ್ಷಯ ತೃತೀಯದ ಮಹತ್ವ ತಿಳಿಯಿರಿ
ಅಕ್ಷಯ ತೃತೀಯದ ಮಹತ್ವ
ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ! ಎನ್ನುವಂತಹ ಅವರ ಭಾಷಣಗಳು. ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠದಲ್ಲಿ ಸಾಲವನ್ನಾ ದರೂ ಮಾಡಿ ತೆಗೆದುಕೊಳ್ಳುವ ಎಷ್ಟೋ, ಮಂದಿಗೆ ನಿಜವಾದ ಅಕ್ಷಯ ತೃತೀಯದ ಬಗ್ಗೆ ಗೊತ್ತೇ ಇರುವುದಿಲ್ಲ.
ಶ್ರೀಮಂತರ ಆದಿಯಾಗಿ ಕೂಲಿ ಮಾಡುವವರಿಗೂ ಕೂಡ ಅಂದು ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠ ಎಲ್ಲರ ಮನಸ್ಸಿಗೂ ಚಾಪು ಒತ್ತಿದಂತೆ ಮಾಡಿರುವುದು ಚಿನ್ನದ ಅಂಗಡಿಯವರು. ನಿಜವಾದ ಅಕ್ಷಯ ತೃತೀಯ ಬಗ್ಗೆ ತಿಳಿದುಕೊಳ್ಳಲು ಮುಖಪುಟ ಸ್ನೇಹಿತೆಯೊಬ್ಬರ ಈ ಪುಟ್ಟ ಲೇಖನ ನಿಮ್ಮ ಮುಂದೆ....
ಅಕ್ಷಯ ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ' ಇರುವುದು ಎಂದರ್ಥ ಮಹಾಭಾರತದಲ್ಲಿ ದ್ರೌಪದಿಗೆ ಶ್ರೀಕೃಷ್ಣನು ಅಕ್ಷಯ ಪಾತ್ರೆ ಯನ್ನು ಕೊಟ್ಟು ಅದರಿಂದ ಅವನು ಊಟ ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿದಂತಹ ಘಟನೆ ನಿಮಗೆ ಗೊತ್ತಿರ ಬಹುದು. ಅಕ್ಷಯ ಎಂದರೆ ಬರುತ್ತಲೇ ಇರುವುದು ಅಂದರೆ ಅದಕ್ಕೆ ಅಂತ್ಯವಿಲ್ಲದಿರುವುದು ವೈಶಾಖ ಮಾಸ ಶುಕ್ಲಪಕ್ಷ ತೃತೀಯ ದಿನ ರೋಹಿಣಿ ನಕ್ಷತ್ರವು ಇದ್ದರೆ ಅಂದು ಮೂರುವರೆಗಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ.
ಅಕ್ಷಯ ತೃತಿಯ ಬಗ್ಗೆ ನಮ್ಮ ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಉಲ್ಲೇಖವಿದೆ ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಅತ್ಯಂತ ಪವಿತ್ರ ದಿನವನ್ನಾಗಿ ಆಚರಿಸುತ್ತಾರೆ. ಈ ದಿನದ ಮಹತ್ವದ ಬಗೆಗೆ ಹೇಳುವುದಾದರೆ ವಿಷ್ಣುವಿನ ಅವತಾರವಾದ ಪರಶು ರಾಮ ಅವತಾರ ಅಕ್ಷಯ ತೃತೀಯದ ದಿನವೇ ಆಗಿತ್ತು ಶ್ರೀ ಕೃಷ್ಣ ಪರ ಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲ ಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ
ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನಿಗೆ, ನೀಡಿದ ಅಕ್ಷಯ ವಾದಂ ತಹ ಐಶ್ವರ್ಯ ಪ್ರಾಪ್ತಿ ಗಳು ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣ ವನ್ನು ವ್ಯಾಸರು ರಚಿಸಿದ ಸುಮುಹೂರ್ತವೆ ಅಕ್ಷಯ ತೃತೀಯ. ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಅವತರಿಸಿದ ದಿನವೂ ಅಕ್ಷಯ ತೃತಿಯ ಈ ದಿನವು ತ್ರೇತ ಯುಗದ ಆರಂಭವನ್ನು ಸೂಚಿಸುತ್ತದೆ.
ಅದಲ್ಲದೆ ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು, ದಾನಸೂರ ಕರ್ಣನು ಜನಿಸಿದ್ದು, ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ಸಂಯೋಜಿಸಲಾರಂಭಿಸಿದ್ದು ಕಾಯಕ ಯೋಗಿ ಬಸವಣ್ಣನವರು ಜನಿಸಿದ್ದು ಮಹಾಲಕ್ಷ್ಮಿ ಯನ್ನು ಆರಾಧಿಸಿ ಕುಬೇರನು ಅಷ್ಟೈಶ್ವರ್ಯವ ಪ್ರಾಪ್ತಿ ಪಡೆದದ್ದು , ಅಕ್ಷಯ ತೃತೀಯ ಶುಭ ಸೂಚಕ ಮಹತ್ತರ ಘಟನೆಗಳು ಗತಿಸಿದ್ದು ಈ ಮಹಾದಿನದಂದೆ, ಹೊಸ ಉದ್ಯಮಗಳು, ಹೂಡಿಕೆ ಗಳನ್ನು ಪ್ರಾರಂಭಿ ಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.
ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದು ಕೊಳ್ಳ ಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ.
ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡ ಬಹುದು ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳನ್ನು ದೇವರ ದರ್ಶನವನ್ನು ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ ಆಗಬಹುದು ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿ ನಗಳು ದೂರವಾಗುತ್ತದೆ.ಹಣ್ಣು ಹಂಪಲುಗಳನ್ನು ದಾನ ಮಾಡಿ ದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ.ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.
ಮಜ್ಜಿಗೆ ಮೊಸರು ದಾನಮಾಡಿದರೆ ಮಾಡಿದ ಪಾಪಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆಇದೆಲ್ಲದಕ್ಕಿಂತ ಹೆಚ್ಚಿನದಾಗಿ ಬೆಳಿಗ್ಗೆ ಗೋ ಮಾತೆಗೆ ಪೂಜೆ ಪುನಸ್ಕಾರಗಳನ್ನು ಮಾಡಿ ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ
ಪಾತ್ರವಾಗುತ್ತದೆ.
0 Comments